ಕಾಡಿಕಾರ

 ಸ್ಫಟಿಕರೂಪದ ಅಸಿಟಿಕ್ ಆಮ್ಲ. ಪಟಕ, ಫೀನಾಲ್, ಟ್ರೈಕ್ಲೋರ್ ಅಸಿಟಿಕ್ ಆಮ್ಲ, ಬೆಳ್ಳಿಯ ನೈಟ್ರೇಟ್, ಸಾಲಿಸಿಲಿಕ್ ಆಮ್ಲ, ಸತುವಿನ ಕ್ಲೋರೈಡ್ ಮತ್ತು ಪೊಟಾಸಿಯಂ ಪರ್‍ಮ್ಯಾಂಗನೇಟ್ ಪ್ರಮುಖ ಉದಾಹರಣೆಗಳು (ಕಾಸ್ಟಿಕ್). ಇವನ್ನು ಲೇಪಿಸಿದ ಪ್ರದೇಶದಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಯ ಫಲವಾಗಿ ಆ ಪ್ರದೇಶ ಧ್ವಂಸವಾಗುತ್ತದೆ. ಈ ವಸ್ತುಗಳು ನಂಜುರೋಧಕವಾಗಿಯೂ ಕೆಲಸಮಾಡುತ್ತವೆ. ಕಾಡಿಕಾರವನ್ನು ದೇಹದ ಮೇಲಿನ ನರೂಲಿ, ಮಚ್ಚೆ, ಹೆಚ್ಚುವರಿಗೊಂಡು ಬೆಳೆದ ಅಂಗಭಾಗಗಳು ಮತ್ತು ಕಾಲಿನ ಅಣಿಯನ್ನು ಧ್ವಂಸಗೊಳಿಸಲು ಉಪಯೋಗಿಸಲಾಗುತ್ತದೆ.

 ಶರೀರದ ಹೊರಭಾಗದಲ್ಲಿ ಕಾಡಿಕಾರ ವಸ್ತುಗಳನ್ನು ಸವರಿದಾಗ ಇಲ್ಲವೆ ತೀಡಿದಾಗ ಆ ಪ್ರದೇಶದಲ್ಲಿನ ಅಂಗಭಾಗಗಳು ಧ್ವಂಸಗೊಳ್ಳುತ್ತವೆ. ಈ ವಸ್ತುಗಳನೇಕವು ಅಲ್ಲಿನ ಜೀವಕಣದಲ್ಲಿನ ಸಾರಜನಕ ವಸ್ತುಗಳನ್ನು ಕರಣೆಗೊಳಿಸಿ ಒಗ್ಗೂಡಿಸುತ್ತವೆ. ಅದರಿಂದಾಗಿ ಉಂಟಾಗುವ ಉರಿಯ ಫಲವಾಗಿ ಆಗುವ ಒಸರಿಕೆ ಪಕಳೆಗೊಂಡು ಉದುರಿ ಆ ಪ್ರದೇಶದಲ್ಲಿ ಕಲೆಯನ್ನುಂಟುಮಾಡುತ್ತದೆ. ಕೆಲಮೊಂದು ಕ್ಷಾರವಸ್ತುಗಳು ಕರಣೆಯಂತೆ ಒಗ್ಗೂಡಿಸಿದ ಸಾರಜನಕ ವಸ್ತುಗಳನ್ನು ಮರಳಿ ಕರಗಿಸಲೂಬಲ್ಲವು. 

 

(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ